July 18, 2019 6:30 am

ಸಾಧು ಲೂಪ್ ಓಪನ್: SPB ಹೇಳಿದ ಪ್ರಮುಖ ವಿಷ್ಯ ಇದು

ಲೂಪ್ ಬಗ್ಗೆ ಎಸ್ ಪಿ ಬಿಯ ಪಾಸಿಟಿವ್ ಹೋಪ್ ಸಾಧುಕೋಕಿಲ ಸ್ವಂತ ಸ್ಟುಡಿಯೋ ಒಂದನ್ನು ಆರಂಭಿಸಿದ್ದಾರೆ. ಅದರ ಹೆಸರೇ ಲೂಪ್. “ಸಂಗೀತ ಕ್ಷೇತ್ರದಲ್ಲಿ ಇರುವವರಿಗೆ ಲೂಪ್ ಎಂದರೇನು ಎಂದು ತಿಳಿದಿರುತ್ತದೆ
ಈ ಸ್ಟುಡಿಯೋ ಆದ ಮೇಲೆ ಸಾಧು ಸಂಗೀತಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಎನ್ನುವುದು ನನ್ನ ಹೋಪ್” ಎಂದರು ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು. ಲೂಪ್ ಸ್ಟುಡಿಯೋವನ್ನು ಉದ್ಘಾಟಿಸಿದ ಬಳಿಕ ಅವರು ಮಾಧ್ಯಮದ ಜತೆಗೆ ಮಾತನಾಡುತ್ತಿದ್ದರು.
ಸ್ಟುಡಿಯೋದಲ್ಲಿ ವಿಎಫ್ ಎಕ್ಸ್, ಎಸ್ ಎಫ್ ಎಕ್ಸ್, ಡಬ್ಬಿಂಗ್, ಮಿಕ್ಸಿಂಗ್ ಮಾಸ್ಟರಿಂಗ್, ಡಿಟಿಎಸ್ ಮಿಕ್ಸ್, ಎಡಿಟಿಂಗ್ ಮತ್ತು ಕಲರ್ ಗ್ರೇಡಿಂಗ್ ಹೀಗೆ ಹಲವು ವಿಭಾಗದ ಕೆಲಸಗಳು ಇಲ್ಲಿ ನಡೆಯವುದಾಗಿ ಸಾಧು ಕೋಕಿಲ ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*