July 17, 2019 1:11 pm

‘ಹಫ್ತಾ’ ಮುಂದಿನವಾರ ಬಿಡುಗಡೆ

ವರ್ಧನ್ ತೀರ್ಥಹಳ್ಳಿ ಪ್ರಥಮ ಬಾರಿಗೆ ನಾಯಕರಾಗಿ ನಟಿಸಿರುವ ಚಿತ್ರವೇ ಹಫ್ತಾ. ಈಗಾಗಲೇ ಟೀಸರ್ ಮತ್ತು ಹಾಡಿನ ಮೂಲಕ ಗಮನ ಸೆಳೆದಿದ್ದ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.

ವರ್ಧನ್ ಜತೆಗೆ ಯುವ ನಟ ರಾಘವ್ ನಾಗ್ ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಬಿಂಬ ಶ್ರೀ‌ ನೀನಾಸಂ ಮತ್ತು ಸೌಮ್ಯ ಎಂಬ ಇಬ್ಬರು ಪ್ರತಿಭಾವಂತೆಯರನ್ನು ನಾಯಕಿಯರನ್ನಾಗಿ ಪರಿಚಯಿಸಲಾಗುತ್ತಿದೆ. ರೌಡಿಸಂ ಕುರಿತಾದ ಚಿತ್ರವಿದಾಗಿದ್ದು, ರೌಡಿ ಮತ್ತು ಮಂಗಳಮುಖಿಯ ಎರಡು ಶೇಡ್ ನಲ್ಲಿ ವರ್ಧನ್ ಕಾಣಿಸಿಕೊಂಡಿರುವುದು ವಿಶೇಷ. ಪ್ರಕಾಶ್ ಹೆಬ್ಬಾಳ ನಿರ್ದೇಶನದ ಈ ಚಿತ್ರವನ್ನು ಕೆಎಚ್ ಮಂಜುನಾಥ್ ನಿರ್ಮಿಸಿದ್ದಾರೆ. ಚಿತ್ರ ಮುಂದಿನವಾರ ಅಂದರೆ ಜೂನ್ 21ರಂದು ತೆರೆಗೆ ಬರಲಿದೆ.

👇ವಿಡಿಯೋ ತುಣುಕುಗಳು

Be the first to comment

Leave a Reply

Your email address will not be published.


*