June 25, 2019 11:27 pm

ಜೋಗಿಯವರ ಕೃತಿ ಬಿಡುಗಡೆ ಸಾವಣ್ಣ ಪ್ರಕಾಶನ ೧೦೦ನೇ ಕೃತಿ ಸಂಭ್ರಮ

ಕನ್ನಡ ಸಾರಸ್ವತ ಲೋಕದಲ್ಲಿ ಪುಸ್ತಕ ಪ್ರಕಟಣೆಗಳ ಮೂಲಕ ಹೆಸರು ಮಾಡುತ್ತಿರುವ ಸಾವಣ್ಣ ಪಬ್ಲಿಕೇಷನ್ಸ್  ತಮ್ಮ ಸಂಸ್ಥೆಯಿಂದ ನೂರನೇ ಪುಸ್ತಕವನ್ನು ಹೊರಗೆ ತಂದಿದೆ.

ಆಂಗ್ಲ ಭಾಷೆಯ ಎಲ್ ಎಂಬ ಹೆಸರಿನ ಈ ಕಾದಂಬರಿಯನ್ನು ಪತ್ರಕರ್ತ, ಸಾಹಿತಿ ಜೋಗಿಯವರು ರಚಿಸಿದ್ದು ಪುಸ್ತಕದ ಬಿಡುಗಡೆ ಭಾನುವಾರ ನೆರವೇರಿತು.

ನಾಡಿನ ಜನಪ್ರಿಯ ಕವಿಗಳಾದ ಪದ್ಮಶ್ರೀ ನಿಸಾರ್ ಅಹಮದ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಲೇಖಕ ಸುರೇಶ್ ಪದ್ಮನಾಭನ್ ಮ ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿ ಹೆಗಡೆ, ಶ್ರೀವತ್ಸ ನಾಡಿಗ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*