June 18, 2019 11:46 pm

ನನ್ನ ಕೆನ್ನೆಗೆ ಹೊಡೆತ ಬಿದ್ದಿದೆ..ಪ್ರಕಾಶ್ ರಾಜ್..!!

ದೇಶಾದ್ಯಂತ ವಿಜಯದ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ, ಜೊತೆಗೆ ಕರ್ನಾಟಕದಲ್ಲೂ ಸಹ 24ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಇದುವರೆಗಿನ ಸುದ್ದಿ. ಈ ನಿಟ್ಟಿನಲ್ಲಿ ಜಸ್ಟ್ ಆಸ್ಕಿಂಗ್ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕೋಮುವಾದಿ ಎಂದು ವ್ಯಂಗ್ಯವಾಡುತ್ತ, ಹೇಳಿಕೆಗಳನ್ನು ನೀಡುತ್ತಿದ್ದ ಪ್ರಕಾಶ್ ರಾಜ್ ಬೆಂಗಳೂರ್ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.

ಇಲ್ಲಿದೆ ನೋಡಿ ಅವರ ಟ್ವೀಟ್:

ಈಗ ತಮ್ಮ ಸೋಲಿನ ಸುದ್ದಿ ತಿಳಿದ ನಂತರ ತಮ್ಮ ಟ್ವಿಟ್ಟರ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನನ್ನ ಕೆನ್ನೆಗೆ ಸರಿಯಾಗಿ ಹೊಡೆತ ಬಿದ್ದಿದೆ, ಎಂದಿಗಿಂತ ಇನ್ನಷ್ಟು ಬೈಗುಳ,ಟ್ರೋಲ್,ಅಮಾನವೀಯ ನಡೆಗಳು ನನ್ನ ಹಾದಿಯಲ್ಲಿ ನನಗೆ ಭವಿಷ್ಯದಲ್ಲಿ ಸಿಗಲಿವೆ, ಆದರೆ ನಾನು ನನ್ನ ಅಭಿಪ್ರಾಯಕ್ಕೆ ಬದ್ಧನಾಗಿ, ಗಟ್ಟಿಯಾಗಿ ಅಲುಗಾಡದೆ ನಿಲ್ಲಬಲ್ಲೆ. ನನ್ನ ಹೋರಾಟದ ಹಾದಿ ಹೀಗೆ ಮುಂದುವರೆಯಲಿದೆ, ಕೋಮುವಾದಿ ಭಾರತವೂ ಎಂದಿನಂತೆ ಮುಂದುವರೆಯಲಿದೆ, ನನ್ನ ಕಷ್ಟದ ದಿನಗಳು ಇದೀಗ ಪ್ರಾರಂಭವಾಗಿವೆ, ನನ್ನ ಪಯಣದಲ್ಲಿ ನನ್ನೊಂದಿಗೆ ಕೈ ಜೋಡಿಸಿದ ಎಲ್ಲರಿಗೂ ಕೃತಷ್ಣತೆಗಳು’ ಎಂದು ಬರೆದಿದ್ದಾರೆ.

Be the first to comment

Leave a Reply

Your email address will not be published.


*