June 25, 2019 11:21 pm

G S T Input Tax ಗೊತ್ತಾ?ಇಲ್ಲಿದೆ ಮಾಹಿತಿ.

ಜಿ ಎಸ್ ಟಿ ತೆರಿಗೆ ಪದ್ಧತಿಯಲ್ಲಿ ಕಳೆದ ಜುಲೈ 2017 ರಿಂದ ನಿಧಾನವಾಗಿ ಒಂದೊಂದೇ ಹಂತವನ್ನು ದಾಟುತ್ತ, ಹೊಸ ತೆರಿಗೆ ಪಧ್ದತಿಗಳ ಬಗ್ಗೆ ಮಾಹಿತಿ ಪಡೆಯುತ್ತಾ ಹೇಗೋ ಸಾಗುತ್ತಿರುವ ಮಧ್ಯಮ ಮತ್ತು ಸಣ್ಣ ವರ್ತಕರಿಗೆ ಹೂಡುವಳಿ ತೆರಿಗೆ ಇನ್ ಪುಟ್ ಟ್ಯಾಕ್ಸ್ ಸಮಸ್ಯೆ ಈಗ ಒಂದು ರೀತಿ ರೆಗ್ಯುಲರ್ ಟ್ರ್ಯಾಕ್ ಕಡೆ ಬರುವಂತೆ ಮಾಡುತ್ತಿದೆ. ತುಂಬ ಜನ ಜಿ ಎಸ್ ಟಿ ಬಂದಾಗ ಪರವಾನಗಿ ಪಡೆದುಕೊಂಡಿದ್ದರೂ ಜಿ ಎಸ್ ಟಿ ಸಂಖ್ಯೆ ಕೊಡಲು ಹಿಂಜರಿಯುತ್ತಿದ್ದರು, ನಂತರ ನಿಜಕ್ಕೂ ಸಪ್ಲೈಯರ್ಗಳಿಗೆ ನೊಂದಣಿ ಜಿ ಎಸ್ ಟಿ ನಂಬರ್ ಕೊಡುವುದರಿಂದ ತಮಗೆ ಲಾಭವೇ ಹೊರತು ನಷ್ಟವಲ್ಲ, ಎನ್ನುವುದು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಬಂದವರಿಗೆ ಅರ್ಥವಾಯಿತು, ನಂತರ ಅವರು ಕೂಡ ರೆಗ್ಯುಲರ್ ಟ್ರ್ಯಾಕ್ ಕಡೆ ಹೆಜ್ಜೆ ಹಾಕಿದರು. ಇದು ಒಂದು ರೀತಿಯ ಹೊಸ ನೊಂದಣಿ ಪಡೆದವರ ಮಾತಾದರೆ ವ್ಯಾಟ್ ಮತ್ತು ಸರ್ವಿಸ್ ಟ್ಯಾಕ್ಸ್ ಕಡೆಯಿಂದ ವರ್ಗಾವಣೆ ಪಡೆದಿದ್ದ ವರ್ತಕರದ್ದು ಮತ್ತೊಂದು ಬವಣೆಯಾಗಿತ್ತು. ತಮ್ಮ ಹೆಚ್ಚುವರಿ ತೆರಿಗೆ ಇನ್ನೂ ಜಿ ಎಸ್ ಟಿ ಗೆ ಅಡ್ಜಸ್ಟ್ ಆಗಿಲ್ಲ ಎನ್ನುವುದು, ಅಂತಹವರು ಟ್ರಾನ್ಸ್ 1 ಫಾರಂ ಮೂಲಕ ವಿವರಗಳನ್ನು ಸಲ್ಲಿಸಿ ಅದನ್ನು ಪಡೆದುಕೊಂಡರು, ಆದರೆ ಇನ್ನು ಟ್ರಾನ್ಸ್ 1 ಸಲ್ಲಿಸಿ, ವೆರಿಫೈ ಮಾಡದವರು ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ, ಕಾರಣ ಅವರಿಗೆ ಡಿಸೆಂಬರ್ ನಂತರದ ಜಿ ಎಸ್ ಟಿ ಆರ್ 3ಬಿ ರಿಟರ್ನ್ ಸಲ್ಲಿಸಲು ಆಗುತ್ತಿಲ್ಲ, ಅಂತಹವರು ಹೇಗೆ ಈ ಸಮಸ್ಯೆಯಿಂದ ಹೊರಬರುವುದು ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಹೊಸ ನೊಂದಣಿ ಪಡೆದುಕೊಳ್ಳಲು ಹಳೆಯ ಹೂಡುವಳಿ ತೆರಿಗೆ ಸಿಗುವುದಿಲ್ಲ, ಹಳೆಯ ರಿಟರ್ನ್ ಸಲ್ಲಿಸದಿದ್ದರೆ ಪ್ರತಿದಿನದ ಲೇಟ್ ಫೀಸ್ ಕಟ್ಟಲೆಬೇಕು, ಇದು ಒಂದೆರಡು ತಿಂಗಳ ಕಥೆಯಲ್ಲವಾದ್ದರಿಂದ ಒಂದು ರೀತಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

Be the first to comment

Leave a Reply

Your email address will not be published.


*