October 19, 2019 3:46 pm

“ಚಂದ್ರಗ್ರಹಣ” – 16-07-2019 ರ ಮಂಗಳವಾರ ಮಧ್ಯರಾತ್ರಿ, ಅಂದರೆ 17-07-2019 ಕ್ಕೆ ಬಿದ್ದಿರುತ್ತದೆ..! -ಗಿರೀಶ್ ಶರ್ಮ ತುಮಕೂರು

“ಕೇತುಗ್ರಸ್ಥ” ಚಂದ್ರಗ್ರಹಣ..!

16/17-07-2019
ಸ್ಪರ್ಶಕಾಲ : ರಾತ್ರಿ 1.30 ಕ್ಕೆ.
ಮಧ್ಯಕಾಲ : ರಾತ್ರಿ 3.00 ಕ್ಕೆ
ಮೋಕ್ಷಕಾಲ : ರಾತ್ರಿ 4.30 ಕ್ಕೆ
ಭೋಜನ : ಸಾಧ್ಯವಾಗುವವರು, ಶಕ್ತರಾದವರು 12.30 ಒಳಗೆ ಆಹಾರ ಸೇವಿಸಬಹುದು..
ಅಶಕ್ತರು , ವೃದ್ಧರು, ರೋಗಿಗಳು , 3.10 ರ ತನಕನು ಆಹಾರ ಸೇವಿಸಬಹುದು..
ಮಾತ್ರೆ ತಗೊಳೋವ್ರು, ಮಕ್ಕಳು, ಅವರೆಲ್ಲಾ ಉಪವಾಸ ಬೇಡ..
ಗರ್ಭಿಣಿಯರು ಒಳಗಿದ್ದರೆ ಒಳ್ಳೆಯದು.. , ತೊಂದರೆ ಏನು ಆಗೋಲ್ಲ, ಹುಟ್ಟೋ ಮಕ್ಕಳು ಚೆನ್ನಾಗಿ ಹುಟ್ಟುತ್ತವೆ.. ಅದಕ್ಕೆ ಗ್ರಹಣ ಸಮಯದಲ್ಲಿ ಹೊರಗೆ ಬರಬಾರದು ಅನ್ನೋದು..!
“ಶಾಂತಿ ವಿಚಾರ” : “ಧನಸ್ಸುರಾಶಿ” ಮತ್ತು “ಮಕರರಾಶಿ” ಯವರಿಗೆ ಮಾತ್ರ ದೋಷ..!
ಬೇರೆ ಯಾವ ರಾಶಿಗು ದೋಷವಿಲ್ಲ..!
ಸುಮ್ಮನೆ T.V ಅದು ಇದು ನೋಡಿ ತಲೆ ಕೆಡಿಸಿಕೊಳ್ಳಬೇಡಿ..
ಪ್ರಭಾವ ಇರುತ್ತೆ, ದೋಷ ಅಲ್ಲ..!
ಎಲ್ಲ ರಾಶಿಯವರು ಜಪ, ಪಾರಾಯಣ ಮಾಡಿದರೆ ಶುಭ..
“ಗ್ರಹಣ ಪ್ರಭಾವ” ಪ್ರತಿಯೊಂದು ಜೀವಸಂಕುಲದ ಮೇಲೂ ಇದ್ದೇ ಇರುತ್ತದೆ..!
ಹಾಗಂತ ಕೆಟ್ಟದಾಗುತ್ತೆ ಅಂತ ಅಲ್ಲ..!
“ಧನಸ್ಸು” ಮತ್ತು “ಮಕರ ರಾಶಿ” ಇವರಿಗೇನು ದೋಷ ಅಂದರೆ ಕೆಟ್ಟದ್ದು, ತೊಂದರೆಯಾಗುತ್ತೆ ಅಂಥ ಅಲ್ಲ..!
ನಿಮ್ಮ ಮನೆಗಳಿಗೆ ಸಂಭವಿಸೋದ್ರಿಂದ ಹಾಗೆ ದೋಷ ಅಂತಾರೆ ಅಷ್ಟೇ..!
“ಚಂದ್ರಗ್ರಹಣ” ಶ್ಲೋಕ ಬರೆದು ಹತ್ತಿರ ಇಟ್ಟುಕೊಂಡು, “ಗ್ರಹಣ” ನಂತರ ತಾಂಬೂಲದೊಡನೆ ದಾನ ಮಾಡಿ..!
ಅದು ಬಿಟ್ಟರೆ ಬೇರೇನು ದೋಷ ಇರೋಲ್ಲ..!

ಶ್ಲೋಕ

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||
“ಅಕ್ಕಿ”, ಬೆಲ್ಲ , ಹುರುಳೀಕಾಳು , ದಾನ ಮಾಡಬಹುದು ..!
” ಗ್ರಹಣ ” ಮುಗಿದ ನಂತರ “ಹಸುವಿನ ” ದೇಹದ ಮೇಲೆ ನೀರು ಹಾಕಿ, “ಹಣ್ಣು” ಅಕ್ಕಿ ಬೆಲ್ಲ ಕೊಟ್ಟರೆ ತುಂಬಾ ಒಳ್ಳೆಯದು..
ಧನಸ್ಸು ರಾಶಿಯವರು : ಹಸುವಿಗೆ ಹಣ್ಣು ಕೊಟ್ಟು, ಮೇವಿಗೆ (ಹುಲ್ಲು”) ಏನಾದರು ಕೊಡಿ ಅಥವಾ ನೀವೇ ಕೊಡಿಸಿ..!
“ಮಕರ ರಾಶಿ” ಯವರು : ತಂದೆ ತಾಯಿಗೆ ನಮಸ್ಕಾರ ಮಾಡಿ, ಯೋಗಕ್ಷೇಮ ವಿಚಾರಿಸಿ..!
ಅವರು ಇಷ್ಟಪಡೋ ಅಂತಹದ್ದು ಏನಾದರು ಕೊಡಿಸಿ..!
“ಹಸುವಿಗೆ” ಮನೆಯ ಹಿರಿಯರಿಂದ ಪೂಜೆ ಮಾಡಿಸಿ,
ಬಡ ವಿದ್ಯಾರ್ಥಿಗಳಿಗೆ ಅಥವಾ ರೋಗಿಗಳಿಗೆ ಏನಾದರು ಸಹಾಯ ಮಾಡಿ..
ಸರ್ವದೋಷ ನಿವಾರಣೆಯಾಗುತ್ತದೆ..!

1 Comment

  1. ತಾತ್ವಿಕವಾದ ಮುಂದಿನ ಹೆಜ್ಜೆ. . .ಶುಭವಾಲಿ ಮಿತ್ರರಿಗೆ ಮತ್ತು ತಂಡಕ್ಕೆ
    please dont flood mails, unless they are so interesting and valuable to read

Leave a Reply

Your email address will not be published.


*