August 24, 2019 6:59 am

ಅಮರೀಶ್ ಪುರಿಗೆ ಗೂಗಲ್ ಡೂಡಲ್ ಗೌರವ:

ನ್ಯೂಸ್ ಡೆಸ್ಕ್ :
ಖ್ಯಾತ ಬಾಲಿವುಡ್ ನಟ ಅಮರೀಶ್ ಪುರಿ ಯಾರಿಗೆ ತಾನೇ ಗೊತ್ತಿಲ್ಲ…ಮುಗ್ಯಾಂಬೋ ಖುಷ್ ಹುವಾ…ಎನ್ನುತ್ತಾ ಮಿಸ್ಟರ್
ಇಂಡಿಯಾದಲ್ಲಿ ಖಳನಟನಾಗಿ ಹೇಳಿದ ಈ ಡೈಲಾಗ್ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

ಅಮರೀಶ್ ಪುರಿ ಅಭಿನಯಿಸಿದ ಅದೆಷ್ಟೋ ಚಿತ್ರಗಳು ಹಿಂದಿ ಚಿತ್ರರಂಗದ ದಿಕ್ಕನ್ನು ಬದಲಿಸಿದ್ದು ಮಾತ್ರವಲ್ಲ ಅವರ ಧ್ವನಿ ಮತ್ತು
ಅದರ ಶೈಲಿಗೆ ಥಿಯೇಟರಿನಲ್ಲಿ ಭಯಬೀತರಾದವರು ಇದ್ದಾರೆ. ಇದರ ಜೊತೆಗೆ ಶಾರುಖ್ ಮತ್ತು ಕಾಜೋಲ್ ಅಭಿನಯದ
ಸೂಪರ್ ಡ್ಯೂಪರ್ ಹಿಟ್ ಚಿತ್ರ ದಿಲ್ ವಾಲೆ ದುಲ್ಹನಿಯಾಲೇ ಜಾಯೆಂಗೆ ಮೂಲಕ ಒಬ್ಬ ಶಿಸ್ತಿನ ತಂದೆಯಾಗಿ ಅವರು ನೀಡಿದ
ಮನೋಜ್ಣ ಅಭಿನಯ ಎವರ್ ಗ್ರೀನ್.
ಇಂತಹ ಅದ್ಭುತ ಕಲಾವಿದನ 87 ನೆ ಜನ್ಮದಿನಾಚರಣೆಯನ್ನು ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ದಿವಂಗತ
ನಟನನ್ನು ಸ್ಮರಿಸಿದೆ.
ಇವರು ಕೇವಲ ಹಿಂದಿ ಚಿತ್ರರಂಗದಲ್ಲಿ ಮಾತ್ರ ಖಟನಟನಾಗಿ ಅಭಿನಯಿಸಿಲ್ಲ, ಜೊತೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಕೆಲಸ
ಮಾಡಿದ್ದಾರೆ. ಕನ್ನಡ, ತೆಲುಗು,ಮಲಯಾಳಂ, ತಮಿಳು ಅಷ್ಟೇ ಅಲ್ಲದೆ, ಇಂಗ್ಲೀಷ್, ಪಂಜಾಬಿ ಚಿತ್ರಗಳಲ್ಲೂ ಅಭಿನಯಿಸಿ ಸೈ
ಎನಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಯಾವ ಚಿತ್ರಗಳು: ಕನ್ನಡದ ಗಂಡಬೇರುಂಡ, ಕಾಡು, ತೆಲುಗಿನ ಆಕರಿ ಪೋರಾಟಂ, ಮೆಗಾಸ್ಟಾರ್ ಚಿರಂಜೀವಿ
ಅಭಿನಯದ ಜಗದೇಕ ವೀರುಡು ಅತಿಲೋಕ ಸುಂದರಿ, ಕೊಂಡವೀಟಿ ದೊಂಗ, ಆದಿತ್ಯ 369 ಸೇರಿದಂತೆ ಹಲವಾರು ಚಿತ್ರಗಳಲ್ಲಿ
ಅಭಿಯನಯಿಸಿದ್ದಾರೆ.

Be the first to comment

Leave a Reply

Your email address will not be published.


*