October 19, 2019 3:54 pm

ಮೇ 12 ವಿಜಯ ಪ್ರಕಾಶ್ ಡೇ ಗೊತ್ತಾ ನಿಮಗೆ?

ಸ್ಟಾರ್ ಸಿಂಗರ್ಸ್ ತಮ್ಮ ಹೆಸರಿನಲ್ಲಿ ಸಂಗೀತ ಸಂಜೆ, ಮ್ಯೂಸಿಕಲ್ ನೈಟ್ ಮಾಡೋದು ನಿಮಗೆ ತಿಳಿದಿರಬಹುದು. ಆದರೆ ಗಾಯಕನ ಹೆಸರಲ್ಲೇ ಒಂದು ದಿನಾಚರಣೆ ಮಾಡುವುದನ್ನು ಬಹುಶಃ ನೀವು ಇದೇ ಮೊದಲ ಬಾರಿ ಕೇಳುತ್ತಿರಬಹುದು. ಅಂಥದೊಂದು ಸೌಭಾಗ್ಯಕ್ಕೆ ಪಾತ್ರವಾದವರು ಕನ್ನಡದ ಹೆಮ್ಮೆಯ ಗಾಯಕ ವಿಜಯ ಪ್ರಕಾಶ್.

ಪ್ರತಿ ವರ್ಷದಂತೆ ತಮ್ಮ ಮ್ಯೂಸಿಕ್ ಟ್ರೂಪ್ ಜತೆಗೆ ಅಮೆರಿಕಾ ಪ್ರವಾಸ ಮಾಡಿದದರು ವಿಜಯ ಪ್ರಕಾಶ್. ಮೇ 12ರಂದು ಯು ಎಸ್ ನಲ್ಲಿ ಕೊನೆಯ ದಿನದ ಕಾರ್ಯಕ್ರಮ ಮುಗಿಸುತ್ತಿದ್ದ ಹಾಗೆ ಅಪಾರವಾಗಿ ಮೆಚ್ಚಿಕೊಂಡ ಅಲ್ಲಿನ ಮೇಯರ್ ಆ ದಿನವನ್ನು ತಮ್ಮ ದೇಶದ ಇತಿಹಾಸದಲ್ಲಿ ವಿಜಯ ಪ್ರಕಾಶ್ ಡೇ ಎಂದು ಆಚರಿಸುವುದಾಗಿ ಘೋಷಿಸಿದರು! ಆ ಘೋಷಣೆಯು ಪ್ರಸ್ತುತ ಅಧಿಕೃತ ಸರ್ಟಿಫಿಕೇಟ್ ಮೂಲಕ ವಿಜಯ ಪ್ರಕಾಶ್ ಅವರನ್ನು ತಲುಪಿದೆ. ಈ ಸಂಭ್ರಮವನ್ನು ಅವರು ನಾಡಿನ ಜತೆಗೆ ಹಂಚಿಕೊಂಡರು.

Be the first to comment

Leave a Reply

Your email address will not be published.


*