August 14, 2020 10:28 pm

ಕಾರ್ನಾಡರ ನೆನಪಲ್ಲಿ ನಾಟಕಗಳ ಓದು

ಗಿರೀಶ್ ಕಾರ್ನಾಡರು ಅಂದರೆ ರಂಗಭೂಮಿಯ ಭಾರತೀಯ ರಂಗಭೂಮಿಯ ದಿಗ್ಗಜ. ಅವರ ನಿಧನದ ಬಳಿಕ ಅವರ ಜನಪ್ರಿಯ ನಾಟಕದ ಪ್ರಮುಖ ಅಧ್ಯಾಯಗಳ ಓದಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಭಿನಯ ತರಂಗದಲ್ಲಿ. ಹಿರಿಯ ಪತ್ರಕರ್ತ, ಬಹುಮುಖ‌ ಪ್ರತಿಭೆ ಜೋಗಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮ ವಿಭಿನ್ನವಾಗಿ ನೆರವೇರಿತು.

ಗಿರೀಶ್ ಕಾರ್ನಾಡ್ ಅವರು ರಚಿಸಿದಂಥ ತುಘಲಕ್, ರಕ್ಕಸ ತಂಗಡಿ ನಾಟಕಗಳ ಅಧ್ಯಾಯಗಳನ್ನು ವೇದಿಕೆಯಲ್ಲಿ ‌ಓದಿದವರು ರಂಗಭೂಮಿ, ಸಿನಿಮಾಗಳ ಜನಪ್ರಿಯ ಕಲಾವಿದ ಅಚ್ಯುತ ಕುಮಾರ್ ಮತ್ತು ಭಾವಗೀತೆಗಳ ಮೂಲಕ ಮನಸೂರೆಗೊಂಡಿರುವ ಗಾಯಕಿ ಎಂ ಡಿ ಪಲ್ಲವಿ. ಜೋಗಿಯವರು ನಿರೂಪಿಸಿದ ಈ‌ ಕಾರ್ಯಕ್ರಮದಲ್ಲಿ ಪತ್ರಕರ್ತ ರವಿ ಬೆಳಗೆರೆ ಮತ್ತು ವಿಜಯಮ್ಮ ಪಾಲ್ಗೊಂಡು ಕಾರ್ನಾಡರ ಜತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

Be the first to comment

Leave a Reply

Your email address will not be published.


*