October 19, 2019 2:42 pm

ಕೊಡಗು ಜನರ ಜೊತೆ ನಾವಿದ್ದೇವೆ : ಶಿವಣ್ಣ ವಿಡಿಯೋ ಸಂದೇಶ

ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯವಾಗಿ ಆಸ್ಪತ್ರೆಗಳ ಅಗತ್ಯವನ್ನು ಸಾರುವಂಥ ಪೋಸ್ಟ್ ಗಳು ಇತ್ತೀಚೆಗೆ ಹರಿದಾಡುತ್ತಿರುವುದನ್ನು ಎಲ್ಲರೂ ಗಮನಿಸಿರುತ್ತೀರಿ. ಉತ್ತರ ಕನ್ನಡ ಮತ್ತು ಕೊಡಗು ಮೊದಲಾದ ಪ್ರದೇಶಗಳ ಮಂದಿ ತಾವು ಆಸ್ಪತ್ರೆಗಳಿಗಾಗಿ ಮಂಗಳೂರು, ಮಣಿಪಾಲ ಅಥವಾ ಮೈಸೂರನ್ನು ಅವಲಂಬಿಸಬೇಕಾಗಿದ್ದಾಗಿ ತಿಳಿಸಿದ್ದರು. ಇದೀಗ ಅವರಲ್ಲಿ ಕೊಡಗಿನ ಮಂದಿಯ ಕೂಗಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ದನಿಗೂಡಿಸಿದ್ದಾರೆ.

ಪಿ ವಾಸು ನಿರ್ದೇಶನದ ಆನಂದ್ ಹೆಸರಿನ ಸಿನಿಮಾದ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೇ ಕೊಡಗಿನಲ್ಲಿ ಒಂದಷ್ಟು ಸಮಯ ಕಳೆದಿದ್ದ ಶಿವಣ್ಣ ಇದೀಗ ಅಲ್ಲಿಂದ ಮರಳಿದ ಮೇಲೆ ಅವರ ಅಭಿಯಾನಕ್ಕೆ ತಮ್ಮ ಬೆಂಬಲ ಇರುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೂಡ ಸಹಾಯಹಸ್ತ ಚಾಚಿದ್ದ ಶಿವರಾಜ್ ಕುಮಾರ್ ಪ್ರಸ್ತುತ ಅಲ್ಲಿ ಒಂದು ಉತ್ತಮ ಆಸ್ಪತ್ರೆ ಎಷ್ಟು ಆವಶ್ಯಕ ಎನ್ನುವುದನ್ನು ಇಲ್ಲಿ ವಿಡಿಯೋದ ಮೂಲಕ ಹಂಚಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*