August 24, 2019 6:23 am

| ಉತ್ತಮ ಸಂದೇಶ ಹೊಂದಿರುವ ನವ ಇತಿಹಾಸ ಸಿನಿಮಾ | Nava Itihaasa Kannada Movie |

ಸ್ತ್ರೀ ಭ್ರೂಣ ಹತ್ಯೆಯನ್ನು ವಿರೋಧಿಸುವ ಮತ್ತು ಜನಸಂಖ್ಯೆಯ ಪ್ರಮಾಣದಲ್ಲಿ ಹೆಣ್ಣಿನ‌ ಅನುಪಾತ ಕಡಿಮೆಯಾಗಿರುವುದನ್ನು ತಿಳಿಸಿ ಎಚ್ಚರಿಸುವ ಕಮರ್ಷಿಯಲ್ ಚಿತ್ರವೊಂದು ತಯಾರಾಗಿದೆ. ನವ ಇತಿಹಾಸ ಹೆಸರಿನ ಈ ಚಿತ್ರಕ್ಕೆ ನವ ನಾಯಕಿ ಅಮೃತಾ ವಿ ರಾಜ್ ಅವರೇ ನಿರ್ಮಾಪಕಿ ಎನ್ನುವುದು ವಿಶೇಷ. ಈ‌ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನೆರವೇರಿತು.

ಕೆಪಿಟಿಸಿಎಲ್ ನಲ್ಲಿ ವೃತ್ತಿ ನಿರತರಾಗಿರುವ ವಸಂತರಾಜ್ ಅವರ ಪುತ್ರಿಯೇ ಅಮೃತಾ ವಿ.ರಾಜ್ ಆಗಿದ್ದು, ಮಗಳು‌ ಸಿನಿಮಾರಂಗದಲ್ಲಿ‌ ನಾಯಕಿಯಾಗಿತ್ತಿರುವುದಕ್ಕೆ ಬೆನ್ನೆಲುಬಾಗಿ ಅವರು ನಿಂತಿದ್ದಾರೆ. ಶ್ರೀರಜನಿ ಮತ್ತು ಸಮರ್ಥ್ ಎಂ ಎಂಬ ಇಬ್ಬರು ಜೋಡಿ‌ ನಿರ್ದೇಶಕರು ಸೇರಿಕೊಂಡು‌ ಚಿತ್ರದ ಕತೆ, ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ವಿನು ಮನಸು‌ ಸಂಗೀತ ಸಂಯೋಜನೆಯಲ್ಲಿ ‌ನಾಲ್ಕು ಹಾಡುಗಳು ಮೂಡಿ ಬಂದಿದ್ದು ಹಾಡಿನ‌ ಜತೆಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಅಲ್ಲಿ ನಡೆಯಿತು.

Be the first to comment

Leave a Reply

Your email address will not be published.


*