August 12, 2020 11:51 pm

ತುಂಬಿ ಹರಿದ ನೇತ್ರಾವತಿ: ಧರ್ಮಸ್ಥಳ ಜಲ ಸಮೃದ್ಧಿ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಮಂಜುನಾಥನ ಅಭಿಷೇಕಕ್ಕೂ ನೀರು ಸಿಗುವುದಿಲ್ಲ ಎಂದಿದ್ದ ಧರ್ಮಸ್ಥಳದಲ್ಲೀಗ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ನೀರಿನ ಸಮಸ್ಯೆ ಬಗೆಹರಿದಿದೆ.

ಬರದಿಂದ ಕಂಗೆಟ್ಟಿದ್ದ ಕರಾವಳಿ ಭಾಗಗಳಲ್ಲಿ ವಾಯು ಚಂಡಮಾರುತದ ಪರಿಣಾಮವಾಗಿ ಮಳೆಯ ಅಬ್ಬರ ಜೋರಾಗಿದ್ದು ಬತ್ತಿದ್ದ ನೇತ್ರಾವತಿಯ ಒಡಲು ತುಂಬಿ ಹರಿಯುತ್ತಿದೆ.

ನೇತ್ರಾವತಿ ಸ್ನಾನಘಟ್ಟದಲ್ಲಿ ನೀರು ತುಂಬಿ ಹರಿಯುತ್ತಿದ್ದು ನೇತ್ರಾವತಿ ನದಿಗೆ ಮತ್ತೆ ಜೀವಕಳೆ ಬಂದಿದ್ದು ಭಕ್ತರು ಸಂತಸದಿಂದ ನೇತ್ರಾವತಿಯಲ್ಲಿ ಮಿಂದೆದ್ದು ಮಂಜುನಾಥನ ದರ್ಶನ ಮಾಡುತ್ತಿದ್ದಾರೆ.

ಏನಿದು ಜಲಕ್ಷಾಮ:

ನೇತ್ರಾವತಿಯಲ್ಲಿ ನೀರು ಬತ್ತಿದ್ದರಿಂದ ಧರ್ಮಸ್ಥಳದಲ್ಲಿ ನೀರಿನ ಅಭಾವ ಉಂಟಾಗಿತ್ತು, ಆದ್ದರಿಂದ ಸ್ವಲ್ಪದಿನ ಧರ್ಮಸ್ಥಳದತ್ತ ನಿಮ್ಮ ಪ್ಲಾನ್ ಇದ್ದರೆ ದಯಮಾಡಿ ಮುಂದೂಡಿ ಎಂದು ಧರ್ಮಾಧಿಕಾರಿಗಳು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Be the first to comment

Leave a Reply

Your email address will not be published.


*