August 14, 2020 10:29 pm

ಪತ್ರಕರ್ತ ರವಿ ಬೆಳಗೆರೆ ‘ಫ್ರಮ್ ಪುಲ್ವಾಮ’ Book Release

ಪುಲ್ವಾಮದಲ್ಲಿ ಉಗ್ರರ ದಾಳಿಯಾದಾಗ ನೇರವಾಗಿ ಸ್ಥಳಕ್ಕೆ ಧಾವಿಸಿ ಸುದ್ದಿ ಮಾಡಿದವರು ಪತ್ರಕರ್ತ ರವಿ ಬೆಳಗೆರೆ. ‌ಆ ಸುದ್ದಿ ದಿಗ್ವಿಜಯ ವಾಹಿನಿ ಮತ್ತು ವಿಜಯವಾಣಿ ಪತ್ರಿಕೆಯ ಮೂಲಕ ಜನರನ್ನು ತಲುಪಿತ್ತು.

ಇದೀಗ ಆ ಘಟನೆ ಸೇರಿದಂತೆ ನಮ್ಮ ಸೈನ್ಯದ ಮತ್ತು ಸಿಆರ್ಪಿಎಫ್ ಯೋಧರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಬೆರೆಸಿ ‘ಫ್ರಮ್ ಪುಲ್ವಾಮ’ ಎಂಬ ಕೃತಿಯನ್ನು ಹೊರಗೆ ತಂದಿದ್ದಾರೆ ಬೆಳಗೆರೆ. ಪುಸ್ತಕವನ್ನು ರಂಗಸ್ವಾಮಿ ಎನ್ನುವ ಯೋಧನ ಕೈಗಳಿಂದ ಬಿಡುಗಡೆಗೊಳಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಕಾಲು ಕಳೆದುಕೊಂಡಿದ್ದ ಆ ಯೋಧನಿಗೆ ತಮ್ಮ ಭಾವನಾ ಪ್ರಕಾಶನದ ಪರವಾಗಿ ಒಂದು ಲಕ್ಷದ ಚೆಕ್ ನೀಡಿ ಗೌರವಿಸಿದರು. ಜನಪ್ರಿಯ ಪತ್ರಕರ್ತ ಜೋಗಿ, ಸಾಹಿತಿ ಚಂದ್ರಶೇಖರ ಆಲೂರು, ಗಾಯಕಿ ನಾಗಚಂದ್ರಿಕಾ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು

Be the first to comment

Leave a Reply

Your email address will not be published.


*