August 14, 2020 10:09 pm

ಸುಧಾಮೂರ್ತಿಯವರತ್ತ ಚಪ್ಪಲಿ ಎಸೆದದ್ದು ಯಾರು?

ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ತನ್ನದೇ ಆದ ಕಾರಣಕ್ಕೆ ವಿಶೇಷವೆನಿಸಿದ್ದು ಖರೆ. ಕಾರಣ ಪ್ರತಿ ವಾರ ಸಿನಿಮಾ ಕ್ಷೇತ್ರದ ಸೆಲೆಬ್ರೆಟಿಗಳ ಬದುಕಿನ ಝಲಕ್ ನೋಡುತ್ತಿದ್ದ ಪ್ರೇಕ್ಷಕರಿಗೆ ಈ ವಾರ ಭರ್ಜರಿ ಸ್ಪೂರ್ತಿದಾಯಕ ಬದುಕಿನ ಕಥೆಯ ರಸದೌತಣ.

ಶನಿವಾರ ಇನ್ಫೋಸಿಸ್ ನಾರಾಯಣಮೂರ್ತಿಯವರ ವಿಶೇಷವಾದರೆ, ಭಾನುವಾರ ಸುಧಾಮೂರ್ತಿಯವರ ಬದುಕಿನ ವಿಚಾರಗಳ ಮೆಲುಕು ಹಾಕುವ ಪ್ರಯತ್ನ.

ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವಾಗ ದೇವದಾಸಿ ಪದ್ಧತಿ ಕಂಡು ಏನಾದರೂ ರೀಹ್ಯಾಬಿಲಿಟೇಷನ್ ಮಾಡಬೇಕು ಎನ್ನುವ ಯೋಚನೆಯೊಂದಿಗೆ ಅಲ್ಲಿ ಹೋದಾಗ ಏನ್ ಮಾಡ್ತೀಯ ನೀನು ಎನ್ನುವಂತೆ ಚಪ್ಪಲಿ ಎಸೆದದ್ದು, ಎರಡನೇ ಸಲ ಹೋದಾಗ ಟೊಮೇಟೋ ಎಸೆದದ್ದು ಇವರಿಗೆ ತುಂಬ ಬೇಸರ ತರಿಸಿತ್ತು. ಆಗ ಅವರ ತಂದೆ ಇದಕ್ಕೆ ಕಾರಣ ಕೇಳುತ್ತಾರೆ, ನಡೆದ ಘಟನೆ ಹೇಳಿದಾಗ ನೀನು ಅವರ ರೀತಿ ಸರಳ ಉಡುಪು ಧರಿಸಿ ಹೋದರೆ ಅವರು ನಿನ್ನನ್ನು ಒಪ್ಪಬಹುದು, ಜೀನ್ಸ್ ಟೀ ಶರ್ಟ್ ಧರಿಸಿ ಅವರ ಮುಂದೆಹೋಗಿ ನೀನು ನಿಂತರೆ ಅವರು ಹೇಗೆ ನಿನ್ನನ್ನು ಒಪ್ಪಿಕೊಳ್ಳಲು ಸಾಧ್ಯ? ಅವರಿಗೆ ಅನ್ನಿಸಬೇಕು ನೀನು ಅವರ  ಹಾಗೆ ಇದೀಯ, ಅವರ ಪಕ್ಕದ ಮನೆಯಾಗಿ ಅನ್ನೋ ಭಾವನೆ ಬಂದರೆ ಆಗ ಅವರು ನಿನ್ನನ್ನು ಒಪ್ಪಿಕೊಳ್ಳಲು ಸಾಧ್ಯ ನಿನಗೆ ಸಪೋರ್ಟ್ ಮಾಡಲು ಸಾಧ್ಯ ಎಂದು ಹೇಳಿದರಂತೆ.

ಆಗ ಇವರು ಸಾದಾ ಸೀದಾ 200 ರೂಪಾಯಿ ಸೀರೆ ಉಟ್ಟು ಸರಳವಾಗಿ ಹೋದಾಗ ಮೊದಲು ದೇವದಾಸಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ‍್ಳಲು ಇವರ ತಂದೆ ಇವರನ್ನು ಕರೆದುಕೊಂಡು ಹೋಗಿ ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡಲು ಬಂದಿದ್ದಾರೆ ಎಂದು ಹೇಳಿದಾಗ, ಇವರು ಮರಾಠಿಯಲ್ಲಿ ನಾನೆಲ್ಲಿ ಹಾಗೆ ಹೇಳಿದೆ…? ಎನ್ನಲು…ಸ್ವಲ್ಪ ಸುಮ್ನಿರು..ಎಂದರಂತೆ.

ಹೀಗೆ ಇವರ ನಿರಂತರ ಶ್ರಮದಿಂದ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಇನ್ಫೋಸಿಸ್ ಫೌಂಡೇಶನ್ ನಾಂದಿ ಹಾಡಿದ್ದು. ಹಣ ಎಷ್ಟೇ ಇದ್ದರೂ, ಸಹಾಯ ಮಾಡುವ ಮನಸ್ಸಿದ್ದರೂ ಹೇಗೆ ಕ್ಲಿಷ್ಟಕರ ಸಂದರ್ಭಗಳು ಎದುರಾಗುತ್ತವೆ ಎನ್ನುವುದಕ್ಕೆ ಸುಧಾ ಮೂರ್ತಿಯವರು ಹೇಳಿದ ಈ ಮಾತು.

ಸಮಾಜದಲ್ಲಿ ಒಳ್ಳೆಯದನ್ನುಮಾಡಲು ಕೂಡ ಎಷ್ಟು ಕಷ್ಟ ಪಡಬೇಕು ಎನ್ನುವುದು ಮತ್ತು ಒಳ್ಳೆಯದನ್ನು ಮಾಡಿಯೇ ಮಾಡುತ್ತೇನೆ ಎನ್ನುವವರಿಗೆ ಯಾವ ಘಟನೆಯೂ ಮುಖ್ಯವಾಗುವುದಿಲ್ಲ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ

Be the first to comment

Leave a Reply

Your email address will not be published.


*